
ಕನ್ನಡ
ವಲಯದ ಹೊಸಾ ಲೇಖನಗಳ ಬಗ್ಗೆ ಈ ಕೆಳಗೆ ನೋಡಿರಿ.. ಪೂರ್ಣ ಲೇಖನ ಓದಲು
"ಈ
ಲೇಖನವನ್ನು ಓದಿರಿ" ಎಂಬ ಲಿಂಕ್ ಅನ್ನು ಒತ್ತಿರಿ..

»»
ಕನ್ನಡದ ಬೆಳವಣಿಗೆ! »
ಹಳೆಗನ್ನಡ »
ಹೊಸಗನ್ನಡ »
ಹಾಳುಗನ್ನಡ
!!
ನಮಸ್ಕಾರ "ಕನ್ನಡಿಗರೇ"!! (ಅಥವಾ ಕಂಗ್ಲೀಷ್
ಬಾಂಧವರೇ!).. ಎಷ್ಟು ಸಲ ಅನ್ನಕ್ಕೆ rice
ಅಂದಿದ್ದೀರಿ? ಊಟಕ್ಕೆ meals ಅಂದಿದ್ದೀರಿ? ಮನೆಗೆ
home ಅಂದಿದ್ದೀರಿ? ಅಮ್ಮನಿಗ mummy, ಅಪ್ಪನಿಗೆ daddy
ಅಂದಿದ್ದೀರಿ? ಎಷ್ಟು ಬಾರಿ ಕನ್ನಡದ ಅಂದವನ್ನು ಈ ರೀತಿ ಕೆಡಿಸಿದ್ದೀರಿ??
ತಿಳಿದೋ-ತಿಳಿಯದೋ ಕನ್ನಡದ ಇಂಪನ್ನು ಮೂಲೆಗುಂಪನ್ನಾಗಿ ಮಾಡಿದ್ದೀರಿ??
ಕನ್ನಡದ ಬೆಳವಣಿಗೆ(evolution)::
ಪುರಾತನ ಕಾಲ :: ಹಳೆಗನ್ನಡ
ಮಧ್ಯಮ ಕಾಲ :: ಹೊಸಗನ್ನಡ
ಈಗಿನ ಕಾಲ :: ಹಾಳುಗನ್ನಡ (ಇದರ ಒಂದು ರೂಪ ("version"), ಕಂಗ್ಲಿಷ್("kanglish")
........
»
ಪೂರ್ಣ ಲೇಖನ ಓದಿರಿ
:: ಇದೇ ಲೇಖನದಲ್ಲಿ »»
»ನಿಮ್ಮ ಭಾಷಾ ಕಲಬೆರಕೆಯನ್ನು
ಅಳೆಯುವ ಸೂತ್ರ!
::ಭಾಷಾ ಕಲಬೆರಕೆ ಅಳೆಯುವ ಸೂತ್ರ::
ಪ್ರತಿ ವಾಕ್ಯದ ಭಾಷಾ ಕಲಬೆರಕೆ = (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ
ವಾಕ್ಯದಲ್ಲಿನ ಒಟ್ಟು ಪದಗಳು)
ಶೇಕಡಾವಾರು ಪ್ರತಿ ವಾಕ್ಯದ ಭಾಷಾ ಕಲಬೆರಕೆ
= [ (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳು)
] X 100 %
....
»
ಪೂರ್ಣ ಲೇಖನ ಓದಿರಿ
ಲೇಖಕರು: ಪ್ರದೀಪ್
::
ಕವನಗಳು::

»»
ಕಲ್ಲರೆ
ಮಹೇಶರ ಕವನಗಳು [5]»
::ಅಪ್ಸರಕೊಂಡ::

ನೆಲದೊಳಗಿನ ಜಲ-
ದಲ್ಲಿ ನೆಲ ಕಂಡರೂ
ಆಳ ಲೆಕ್ಕಕ್ಕೆ ಸಿಗದು.
ಧಾರೆ ಧಾರೆಯಾಗಿ ಹರಿದು
ಧುಮುಕಿ ಜಲಪಾತವಾಗಿ
ಹರಿದೂ ಹರಿಯದಂತೆ-
ಸಾಗುವ ಕೋಡಿಯದು.......
............. [
ಪೂರ್ಣ
ಕವನವನ್ನು ಓದಿರಿ]
::ಊಟ::
ಕಣ್ಣ ಮುಂದಿನ ಕುರುಚಲು
ಬೆಟ್ಟದ ಸೊಪ್ಪು-ಸದೆಗಳ
ನಡುವೆ ಕುರಿ ಮಂದೆಯ
ಹಬ್ಬದೂಟ
ಕಂಬಳಿ ಕುರಬರ ಹುಡುಗನ
ಬೆತ್ತದ ಜೊತೆಗೊಂದು -
ಕರಿ ನಾಯಿ ಮರಿ
ಕಣ್ಣಲ್ಲಿ ಮಾಂಸದ ಆಸೆ........
.....[ಪೂರ್ಣ
ಕವನವನ್ನು ಓದಿರಿ]
::

ಹಾಸ್ಯ ವಲಯ::
ಬೂಬಣ್ಣನ ರಗಳೆಗಳು ::
»»
ಸಂತ: ದೇವರೆಲ್ಲಿರುವನು?....
ಚಿಕ್ಕ ಬೂಬಣ್ಣ: ನಮ್ಮ ಶೌಚಾಲಯದಲ್ಲಿ, ಸ್ವಾಮಿ!
ಸಂತ: ಅಯ್ಯಯ್ಯೋ! ಯಾರದು? ಯಾರಂದರು?
ಚಿಕ್ಕ ಬೂಬಣ್ಣ: ನಾನಂದೆ, ಸ್ವಾಮೀ! ನಮ್ಮಪ್ಪ
ದಿನಾ ಬೆಳಿಗ್ಗೆ ಶೌಚಾಲಯದ ಹೋರಗೆ ನಿಂತು ಬೊಬ್ಬಿಡುತ್ತಾರೆ, "ಓ ದೇವರೇ!
ನೀನಿನ್ನೂ ಇಲ್ಲಿದ್ದೀಯಾ.."
»»
ಬೂಬಣ್ಣ: ನಾನೊಬ್ಬಳನ್ನು ಪ್ರೀತಿಸುತಿರುವೆ.
ಅವಳಿಗದನ್ನು ತಿಳಿಸಲು ಸೂಕ್ತವಾದ ಜಾಗ ಯಾವುದು?
ರಾಮಣ್ಣ: ದೇವಸ್ತಾನದ ಒಳಗೆ..
ಬೂಬಣ್ಣ: ದೇವಸ್ತಾನದೊಳಗೇ?! ಯಾಕೆ..
ರಾಮಣ್ಣ: ಯಾಕೆಂದರೆ, ಅಲ್ಲಿ ಅವಳು ಯಾವುದೇ
ಚಪ್ಪಲಿ, ಪಾದರಕ್ಷೆಯನ್ನು ಹಾಕಿಕೊಂಡಿರುವುದಿಲ್ಲ..
»» ಬೂಬಣ್ಣ
ಹೊಸಾ ಮೋಟಾರ್ ಬೈಕು ಕೊಂಡಾಗ ರಾಮಣ್ಣನನ್ನು ತಿರುಗಾಡಲೆಂದು ಅದರಲ್ಲಿ
ಕರೆದೊಯ್ಯುತ್ತಾನೆ...
ರಾಮಣ್ಣ(ಬೊಬ್ಬಿಡುತ್ತಾ): ಓ ಮೂರ್ಖ! ಇಷ್ಟು
ವೇಗವಾಗಿ ಯಾಕೆ ಗಾಡಿ ಓಡಿಸುತ್ತಿದ್ದೀ?! ನಮ್ಮಿಬ್ಬರ ತಿಥಿ ಮಾಡಿಸಲಾ?! ನನಗೆ
ಭಯವಾಗ್ತಾ ಇದೆ!
ಬೂಬಣ್ಣ: ಯಾಕೆ ಬೊಬ್ಬೆ ಹಾಕ್ತಾ ಇದ್ದೀ?!
ಭಯವಾದ್ರೆ ನನ್ನ ಹಾಗೆ ಕಣ್ಣು ಮುಚ್ಚಿಕೋ..
»» ಬೂಬಣ್ಣ
ಒಂದು ಕಾರು ಕೊಂಡಾಗ ತನ್ನ ಮಿತ್ರರನ್ನು ಅದರಲ್ಲಿ ತಿರುಗಾಡಲು ಕರೆದೊಯ್ಯುತ್ತಾನೆ..
ಅದರಲ್ಲಿ ತಿರುಗಾಡಿ ಹಿಂತಿರುಗಿದ ಮೇಲೆ...
ಬೂಬಣ್ಣ: ಹೇಗಿತ್ತು? ನನ್ನ ಕಾರು!!
ಭೀಮಣ್ಣ ಹಾಗೂ ಚೋಮಣ್ಣ: ಭಲೇ! ಭಲೇ! ಇಂತಹಾ ಕಾರು
ಜಗತ್ತಿನಲ್ಲಿ ಇನ್ನೊಂದಿಲ್ಲ......
ಬೂಬಣ್ಣ: ಅದೇ, ನನ್ನ ಕಾರಿನ ವಿಶೇಷತೆ!
ರಾಮಣ್ಣ: ಹೌದಪ್ಪಾ! ಅದನ್ನೇ ಅವರೂ
ಹೇಳಲಿಕ್ಕಿದ್ರು... ತನ್ನ ಹಾರ್ನ್ ಬಿಟ್ಟು ಬೇರೆಲ್ಲಾ ಭಾಗಗಳೂ ಸದ್ದು ಮಾಡುವ ಕಾರು
ಜಗತ್ತಿನಲ್ಲಿ ಇದೊಂದೇ....
»» ಅಂದು ಬೂಬಣ್ಣ ಮೊದಲ ಸಲ ವಿಮಾನ
ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ
ಬಳಿ ಕೇಳಿ ತಿಳಿದುಕೊಂಡಿದ್ದನು..
ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ!
ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು
ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...
»» ಒಮ್ಮೆ ಬೂಬಣ್ಣ ಹಾಗೂ ಚೋಮಣ್ಣ ಒಂದು
ಉದ್ಯಾನವನಕ್ಕೆ ಹೋಗುತ್ತಾರೆ. ಅಲ್ಲಿ ಕೊಳದಲ್ಲಿ ಮೀನುಗಳು ಈಜಾಡುತ್ತಿರುತ್ತವೆ..
ಚೋಮಣ್ಣ: ಬೂಬಣ್ಣ! ಕೊಳಕ್ಕೆ ಬೆಂಕಿ ಬಿದ್ದರೆ
ಅದರಲ್ಲಿರುವ ಮೀನುಗಳ ಪಾಡೇನಾಗುತ್ತದೆ?
ಬೂಬಣ್ಣ: ಏನಾಗಲ್ಲ! ಅವುಗಳು ಪಕ್ಕದಲ್ಲಿರುವ
ಮರಗಳನ್ನೇರಿ ಕುಳಿತುಕೊಳ್ಳುತ್ತವೆ ಅಷ್ಟೇ..
:: ಇನ್ನೂ ಇವೆ!! ಎಲ್ಲಾ ವ್ಯಂಗ್ಯಭರಿತ ಚಟಾಕಿಗಳಿಗಾಗಿ ಈಗಲೇ
ಹಾಸ್ಯ ವಲಯಕ್ಕೆ ಹೋಗಿ!