»» ಅಂದು ಬೂಬಣ್ಣ ಮೊದಲ ಸಲ ವಿಮಾನ
ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ
ಬಳಿ ಕೇಳಿ ತಿಳಿದುಕೊಂಡಿದ್ದನು..
ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ!
ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು
ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...
»» ಒಮ್ಮೆ ಬೂಬಣ್ಣ ಹಾಗೂ ಚೋಮಣ್ಣ ಒಂದು
ಉದ್ಯಾನವನಕ್ಕೆ ಹೋಗುತ್ತಾರೆ. ಅಲ್ಲಿ ಕೊಳದಲ್ಲಿ ಮೀನುಗಳು ಈಜಾಡುತ್ತಿರುತ್ತವೆ..
ಚೋಮಣ್ಣ: ಬೂಬಣ್ಣ! ಕೊಳಕ್ಕೆ ಬೆಂಕಿ ಬಿದ್ದರೆ
ಅದರಲ್ಲಿರುವ ಮೀನುಗಳ ಪಾಡೇನಾಗುತ್ತದೆ?
ಬೂಬಣ್ಣ: ಏನಾಗಲ್ಲ! ಅವುಗಳು ಪಕ್ಕದಲ್ಲಿರುವ
ಮರಗಳನ್ನೇರಿ ಕುಳಿತುಕೊಳ್ಳುತ್ತವೆ ಅಷ್ಟೇ..
»» ಒಮ್ಮೆ ಬೂಬಣ್ಣ ಹಾಗೂ ಮಿತ್ರರು
ಪ್ರವಾಸಕ್ಕೆ ಹೋಗುತ್ತರೆ..
ರಾಮಣ್ಣ: ಅಲ್ನೋಡು! ಆ ಪುರಾತನ ದೇವಸ್ತಾನ
ಸುಮಾರು ೪೦೦೦ (4000)(ನಾಲ್ಕು ಸಾವಿರ) ವರ್ಷ ಹಳೆಯದು..
ಬೂಬಣ್ಣ: ಸುಮ್ನೆ ಬೋಗಳೆ ಬಿಡಬೇಡ! ಈಗಿನ್ನೂ
೨೦೦೭ (2007)!
»» ಬೂಬಣ್ಣ ಹೇಳಿದನು..
ನಾನು ಯಾವತ್ತೂ ಮದುವೆಯಾಗುವುದಿಲ್ಲ! ಹಾಗೂ ನನ್ನ ಮಕ್ಕಳಿಗೂ ಅದನ್ನೇ ಬೋಧಿಸುವೆ..
»» ಒಮ್ಮೆ ಬೂಬಣ್ಣನಿಗೊಂದು ಚಿಕ್ಕ
ಹೊಟ್ಟೆಯ ಆಪರೇಷನ್ ಆಯ್ತು. ಅವನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮೊದಲು,
ವೈದ್ಯರು(doctor) ಇನ್ನೊಂದು ಕ್ಷ-ಕಿರಣ ತಪಾಸಣೆಗೊಳಪಡಿಸಿದರು(x-ray test). ಆಗ
ವೈದ್ಯರಿಗೆ ತಮ್ಮ ಕೈಗವಸು(gloves) ಇನ್ನೂ ಬೂಬಣ್ಣನ ಹೊಟ್ಟೆಯೊಳಗೇ ಇರುವ ಸಂಗತಿ
ತಿಳಿಯಿತು!
ವೈದ್ಯರು(ಈ ವಿಷಯ ಬೂಬಣ್ಣನಿಗೆ ತಿಳಿಸುತ್ತಾ..):
ಬೂಬಣ್ಣ! ಈ ತಪ್ಪಿಗಾಗಿ ಕ್ಷಮಿಸು. ಅದನ್ನು ಹೊರತೆಗೆಯಲು ಇನ್ನೊಂದು ಚಿಕ್ಕ ಆಪರೇಷನ್
ಮಾಡಬೇಕಾಗಿದೆ...
ಬೂಬಣ್ಣ: ಅಯ್ಯೋ! ಇಷ್ಟು ಚಿಕ್ಕ ವಿಷಯಕ್ಕೆ ಯಾಕೆ
ತಲೆ ಕೆಡಿಸಿಕೊಳ್ಳುತ್ತೀರಿ?! ಈ ಹಣ ತಗೊಂಡು ಒಂದು ಹೊಸಾ ಕೈಗವಸು ಕೊಂಡುಕೊಳ್ಳಿ...
»»
ಬೂಬಣ್ಣ: ನನ್ನ ಬೆಕ್ಕು ತನ್ನ ಹೆಸರು ತಾನೇ
ಹೇಳುತ್ತದೆ!
ರಾಮಣ್ಣ: ನಿಜವಾಗಿಯೂ?! ಏನದರ ಹೆಸರು?
ಬೂಬಣ್ಣ: "ಮೀಯಾಂವ್"!
»»
ರಾಮಣ್ಣ: ನಾವು ನೀರಿನಿಂದೇಕೆ ವಿದ್ಯುತ್ ಶಕ್ತಿ
ಉತ್ಪಾದಿಸುತ್ತೇವೆ?
ಬೂಬಣ್ಣ: ಇಲ್ಲದಿದ್ದರೆ, ನಾವು ನೀರು
ಕುಡಿಯುವಾಗ ನಮಗೆ ಶಾಕ್ ಹೊಡೆಯುವುದಿಲ್ಲವೇ?!
»»
ರಾಮಣ್ಣ: ಬರಲೇ ಬೂಬಣ್ಣ, ನಾನು ಹಂಪನಕಟ್ಟೆಯಲ್ಲಿ
ಬಸ್ಸು ಹಿಡಿದು ಹೋಗುತ್ತೇನೆ...
ಬೂಬಣ್ಣ: ಅದನ್ನು ಹಿಡಿಯಲು ಹೇಗೆ ಸಾಧ್ಯ?!
ಬಸ್ಸುಗಳು ನಿನಗಿಂತ ತುಂಬಾ ದೊಡ್ಡ ಹಾಗೂ ಭಾರ ಇರುತ್ತವೆ..
»» ಬೂಬಣ್ಣ ಚಿಕ್ಕವನಿರುವಾಗ, ದೀಪಾವಳಿ
ಸಮಯದಲ್ಲಿ ತನ್ನ ಅಮ್ಮನ ಜೊತೆಯಲ್ಲಿ ಖರೀದಿಗೆ ಹೊರಟಾಗ...
ಚಿಕ್ಕ ಬೂಬಣ್ಣ: ಅಮ್ಮಾ! ಅಮ್ಮಾ!.. ನಂಗೆ ಆ
ಕೆಂಪು ಬಣ್ಣದ ದೊಡ್ಡ ಪಟಾಕಿ ಬೇಕು! ಅದ್ರಿಂದ ದೊಡ್ಡ ಸದ್ದಾಗುತ್ತದೆ.. ನಂಗದೇ ಬೇಕು!..
ಅಮ್ಮ: ಏನು.. ..!!!!.. ಅಯ್ಯೊ! ದೇವರೇ!!
ಮೂರ್ಖಾ! ಅದು ದೊಡ್ಡ ಪಟಾಕಿಯಲ್ಲ, ಗ್ಯಾಸ್ ಸಿಲಿಂಡರು!!
»» ಒಮ್ಮೆ ಬೂಬಣ್ಣ ನಡುರಾತ್ರಿಯಲ್ಲಿ
ಒಬ್ಬನೇ ಮನೆಗೆ ಹಿಂದಿರುಗುತ್ತಿರುವಾಗ, ಇಬ್ಬರು ಕಳ್ಳರು ಅವನ ಮೇಲೆ ಬೀಳುತ್ತಾರೆ.
ಆದ್ರೆ ನಮ್ಮ ಬೂಬಣ್ಣನೂ ಅಷ್ಟು ಸುಲಭದಲ್ಲಿ ಬಿಟ್ಟುಕೊಡುವವನಲ್ಲ! ಇಬ್ಬರು
ಕಳ್ಳರನ್ನೂ ಚೆನ್ನಾಗಿ ಥಳಿಸಿದನು. ಆದ್ರೆ, ಕೊನೆಗೆ ಹೇಗೋ ಕಳ್ಳರು ಅವನನ್ನು
ಹಿಡಿದಿಡುವಲ್ಲಿ ಸಫಲರಾದರು. ಅವನ ಎಲ್ಲಾ ಕಿಸೆಗಳನ್ನೂ ಶೋಧಿಸಿದ ಮೇಲೆ ಅವರಿಗೆ
ಕೇವಲ ೫೦ಪೈಸೆ(50 paise) ಸಿಕ್ಕಿತು!
ಕಳ್ಳ: ಯಾವ ಮುಠ್ಠಾಳನಯ್ಯಾ ನೀನು?!! ಬರೀ ೫೦
ಪೈಸೆಗೆ ಇಷ್ಟೆಲ್ಲಾ ಹೋರಾಡಿದೀ...
ಬೂಬಣ್ಣ: ನಂಗೇನು ಗೊತ್ತಿತ್ತು ನೀವು ಅದರ ಹಿಂದೆ
ಬಿದ್ದಿದ್ದೀರಿ ಅಂತ?! ನನ್ನ ಕಾಚದೋಳಗಿನ ೧೦೦೦ರೂಪಾಯಿಗಳ(1000 rupees) ಹಿಂದೆ
ಬಿದ್ದಿದ್ದೀರಿ ಅಂದುಕೊಂಡೆ..
»» ಚಿಕ್ಕವನಾಗಿದ್ದಾಗ,
ಬೂಬಣ್ಣನಿಗೊಮ್ಮೆ ಒಂದು ಹುಲಿಮರಿ ಸಿಕ್ಕಿತು. ಅದನ್ನು ಹಿಡಿದುಕೊಂಡು ತನ್ನ ತಂದೆಯ
ಬಳಿ ತಂದನು..
ಬೂಬಣ್ಣ: ಅಪ್ಪಾ! ನಂಗಿದು ದಾರಿಯಲ್ಲಿ ಸಿಕ್ಕಿತು. ಏನು ಮಾಡಲಿ?
ಅಪ್ಪ(ಹೆದರಿಕೊಂಡು): ಅದನ್ನು ಈಗಲೇ ಮೃಗಾಲಯಕ್ಕೆ(zoo) ಕರೆದುಕೊಂಡು ಹೊಗು!
ಮರುದಿನ ಬೂಬಣ್ಣನ ಅಪ್ಪ ನೋಡಿದ್ರೆ, ಆ ಹುಲಿಮರಿಯು ಇನ್ನೂ ಬೂಬಣ್ಣನ ಬಳಿಯೇ ಇತ್ತು!
ಅಪ್ಪ: ನಿನಗೆ ಹೇಳಿದ್ರೆ ಭಾಷೆ ಇಲ್ಲವೇ?!
ಅದನ್ನು ನಿನ್ನೆಯೇ ಮೃಗಾಲಯಕ್ಕೆ ಕರೆದುಕೊಂಡು ಹೋಗೆಂದು ಹೇಳಿದ್ದೆನಲ್ಲಾ..
ಬೂಬಣ್ಣ: ಆದ್ರೆ ಅಪ್ಪಾ! ನೀನು ಹೇಳಿದ ಹಾಗೆಯೇ
ನಿನ್ನೆ ಮೃಗಾಲಯಕ್ಕೆ ಅದನ್ನು ಕೊಂಡೊಯ್ದಿದ್ದೆ.. ಇವತ್ತು ಅದನ್ನು ತಿರುಗಾಡಿಸಲು
ಒಂದು ಸಿನಿಮಾಕ್ಕೆ ಕರೆದುಕೊಂಡು ಹೋಗೋಣ ಅಂತಿದ್ದೇನೆ..
»» ಚಿಕ್ಕವನಾಗಿದ್ದಾಗ, ಒಮ್ಮೆ ಬೂಬಣ್ಣ
ತನ್ನ ತಂದೆಯೊಡನೆ ಊಟ ಮಾಡುತ್ತಿದ್ದನು...
ಬೂಬಣ್ಣ: ಅಪ್ಪಾ! ಒಂದು ವಿಷಯ...
ಅಪ್ಪ: ಸುಮ್ಮನಿರು! ಊಟ ಮಾಡುವಾಗ ಮಾತನಾಡಬಾರದು!
ಬೂಬಣ್ಣ: ಆದ್ರೆ ಅಪ್ಪಾ!...
ಅಪ್ಪ: ಹೇಳಿದ್ದು ಗೊತ್ತಾಗಲಿಲ್ವೇ?! ಸುಮ್ಮನಿರು!
ಮತ್ತೆ ಬೂಬಣ್ಣ ಸುಮ್ಮನೇ ಊಟ ಮಾಡಿದ. ಅವರ ಊಟ ಮುಗಿದ ನಂತರ...
ಅಪ್ಪ: ಈಗ ಹೇಳು, ನಿಂಗೇನು ಹೇಳ್ಬೇಕಿತ್ತು?
ಬೂಬಣ್ಣ: ನಿಮ್ಮ ಊಟದಲ್ಲಿ ಒಂದು ಸತ್ತ ಜಿರಳೆ
ಬಿದ್ದಿತ್ತು. ಇಷ್ಟೇ ಹೇಳ್ಲಿಕ್ಕಿತ್ತು...
»»
ರಾಮಣ್ಣ: ಸುವರ್ಣ ಕನ್ನಡ ರಾಜ್ಯೋತ್ಸವದ
ಶುಭಾಷಯಗಳು! ಇಂದು ನಮ್ಮ ಕನ್ನಡಾಂಬೆಗೆ ೫೦ ವರ್ಷವಾಯಿತು (50 years)!!
ಬೂಬಣ್ಣ: ಪಾಪ! ಯಾವುದೋ ಬದಪಾಯಿ ಹೆಂಗಸು
ವೃಧ್ಧಳಾದ್ರೆ ಅದರಲ್ಲಿ ಸಂತಸದ ಸುದ್ದಿ ಏನಿದೆ?..
»» ಒಮ್ಮೆ ಬೂಬಣ್ಣ ತುಂಬಿದ
ಸಭಾಂಗಣದಲ್ಲಿ ಹಾಡುತ್ತಾನೆ. ಅವನ ಹಾಡು ಮುಗಿದಂತೆಯೇ ಅಲ್ಲಿ ನೆರೆದಿದ್ದವರೆಲ್ಲಾ
ಭಾರೀ ಚಪ್ಪಾಳೆ ತಟ್ಟುತ್ತಾರೆ, ಕೇಕೆ ಹಾಕುತ್ತಾರೆ!
ಸೋಮಣ್ಣ (ಕಿರುಚುತ್ತಾ): ನಿಮ್ಮೆಲ್ಲರಿಗೇನು
ಹುಚ್ಚು ಹಿಡಿದಿದ್ದೆಯಾ?! ಚಪ್ಪಲ್ ಬಿಸಾಕಬೇಕಾದ ಆ ಕತ್ತೆ ಕಿರುಬನ ಹಾಡಿಗೆ ಯಾಕೆ
ಚಪ್ಪಾಳೆ ತಟ್ಟುತ್ತಿದ್ದೀರಿ?!
ರಾಮಣ್ಣ: ಅಬ್ಬಾ!! ಕೊನೆಗೂ ಹಾಡು
ನಿಲ್ಲಿಸಿದ್ನಲ್ಲಾ!! ಅದಕ್ಕೆ ಚಪ್ಪಾಳೆ ತಟ್ಟುತ್ತಿದ್ದೇವೆ...
»Disclaimer