untitled
 

::ಬೂಬಣ್ಣನ ರಗಳೆಗಳು

   
 

Pradeepzone>Funzone>Jokes>Boobanna
» Scientific » Q & A » Boobanna's Jokes » Funny Jokes » Silly Jokes » Not So Funny » Kannada Jokes
»ಬೂಬಣ್ಣನ ರಗಳೆಗಳು » boobanna's adventures in kannada
Latest Additions !!ಹಾಸ್ಯ ವಲಯಕ್ಕೆ ನಿಮಗೆ ಸುಸ್ವಾಗತ!!. ಇಲ್ಲಿ ಬೂಬಣ್ಣನ ಎಲ್ಲಾ ಹಾಸ್ಯ ಚಟಾಕಿಗಳ ನಿಮ್ಮನ್ನು ರಂಜಿಸಲಿವೆ!. ತಡವಾಗಿ ಬಂದವರಿಗೆ, "ಬೂಬಣ್ಣ" (ಕನ್ನಡ/ತುಳು) ಒಬ್ಬ ಕಾಲ್ಪನಿಕವಾದ ಮೂರ್ಖ ಹಾಗೂ ಪೆದ್ದ "character". ಮತ್ತು ಇವನು pradeepzoneನಲ್ಲಿ ಮಾತ್ರ ಲಭ್ಯ! ಅವನ ಮೂರ್ಖತನದ ವ್ಯಂಗ್ಯ "ಲೀಲೆಗಳು" ಇಲ್ಲಿ ಲಭ್ಯವಿವೆ..
ಹಾಗೂ, ನಮ್ಮ ಪ್ರಿಯ "ಕಂಗ್ಲಿಷ್" ಬಾಂಧವರಿಗಾಗಿ, ಕೆಲವು ಕನ್ನಡ ಶಬ್ದಗಳ ಆಂಗ್ಲ(ಇಂಗ್ಲೀಷ್) ಅರ್ಥಗಳನ್ನೂ ಜೊತೆಯಲ್ಲಿ ನೀಡಿದ್ದೇವೆ!! ಉದಾಹರಣೆಗೆ, ಆರಕ್ಷಕ (ಪೋಲೀಸ್)! ಪ್ರಿಯ ಕನ್ನಡಿಗರೇ! ಇನ್ಯಾವುದಾದರೂ ಕನ್ನಡ ಪದಗಳು ಅರ್ಥವಾಗದಿದ್ದಲ್ಲಿ, ನಮ್ಮಲ್ಲಿ ಕೇಳಲು ಸಂಕೋಚ ಪಡಬೇಡಿ! :-)
 
Note: This section contains Kannada text.
Without proper rendering support, you may see question marks, boxes, or other symbols instead of Kannada characters.


  ಬೂಬಣ್ಣನ ರಗಳೆಗಳು » [ ಹೊಚ್ಚ ಹೊಸತು ]

»»
ಬೂಬಣ್ಣ: ಮೂರ್ಖತನದ ಪರಮಾವಧಿ ಯಾವುದು?
ರಾಮಣ್ಣ: ಹಂ... ನಿನ್ನ ಭಾವಚಿತ್ರ ನೋಡು, ತಿಳಿಯುತ್ತೆ!

»»
ಸಂತ: ದೇವರೆಲ್ಲಿರುವನು?....
ಚಿಕ್ಕ ಬೂಬಣ್ಣ: ನಮ್ಮ ಶೌಚಾಲಯದಲ್ಲಿ, ಸ್ವಾಮಿ!
ಸಂತ: ಅಯ್ಯಯ್ಯೋ! ಯಾರದು? ಯಾರಂದರು?
ಚಿಕ್ಕ ಬೂಬಣ್ಣ: ನಾನಂದೆ, ಸ್ವಾಮೀ! ನಮ್ಮಪ್ಪ ದಿನಾ ಬೆಳಿಗ್ಗೆ ಶೌಚಾಲಯದ ಹೋರಗೆ ನಿಂತು ಬೊಬ್ಬಿಡುತ್ತಾರೆ, "ಓ ದೇವರೇ! ನೀನಿನ್ನೂ ಇಲ್ಲಿದ್ದೀಯಾ.."

»»
ಬೂಬಣ್ಣ: ನಾನೊಬ್ಬಳನ್ನು ಪ್ರೀತಿಸುತಿರುವೆ. ಅವಳಿಗದನ್ನು ತಿಳಿಸಲು ಸೂಕ್ತವಾದ ಜಾಗ ಯಾವುದು?
ರಾಮಣ್ಣ: ದೇವಸ್ತಾನದ ಒಳಗೆ..
ಬೂಬಣ್ಣ: ದೇವಸ್ತಾನದೊಳಗೇ?! ಯಾಕೆ..
ರಾಮಣ್ಣ: ಯಾಕೆಂದರೆ, ಅಲ್ಲಿ ಅವಳು ಯಾವುದೇ ಚಪ್ಪಲಿ, ಪಾದರಕ್ಷೆಯನ್ನು ಹಾಕಿಕೊಂಡಿರುವುದಿಲ್ಲ..

»» ಬೂಬಣ್ಣ ಹೊಸಾ ಮೋಟಾರ್ ಬೈಕು ಕೊಂಡಾಗ ರಾಮಣ್ಣನನ್ನು ತಿರುಗಾಡಲೆಂದು ಅದರಲ್ಲಿ ಕರೆದೊಯ್ಯುತ್ತಾನೆ...
ರಾಮಣ್ಣ(ಬೊಬ್ಬಿಡುತ್ತಾ): ಓ ಮೂರ್ಖ! ಇಷ್ಟು ವೇಗವಾಗಿ ಯಾಕೆ ಗಾಡಿ ಓಡಿಸುತ್ತಿದ್ದೀ?! ನಮ್ಮಿಬ್ಬರ ತಿಥಿ ಮಾಡಿಸಲಾ?! ನನಗೆ ಭಯವಾಗ್ತಾ ಇದೆ!
ಬೂಬಣ್ಣ: ಯಾಕೆ ಬೊಬ್ಬೆ ಹಾಕ್ತಾ ಇದ್ದೀ?! ಭಯವಾದ್ರೆ ನನ್ನ ಹಾಗೆ ಕಣ್ಣು ಮುಚ್ಚಿಕೋ..

»» ಬೂಬಣ್ಣ ಒಂದು ಕಾರು ಕೊಂಡಾಗ ತನ್ನ ಮಿತ್ರರನ್ನು ಅದರಲ್ಲಿ ತಿರುಗಾಡಲು ಕರೆದೊಯ್ಯುತ್ತಾನೆ.. ಅದರಲ್ಲಿ ತಿರುಗಾಡಿ ಹಿಂತಿರುಗಿದ ಮೇಲೆ...
ಬೂಬಣ್ಣ: ಹೇಗಿತ್ತು? ನನ್ನ ಕಾರು!!
ಭೀಮಣ್ಣ ಹಾಗೂ ಚೋಮಣ್ಣ: ಭಲೇ! ಭಲೇ! ಇಂತಹಾ ಕಾರು ಜಗತ್ತಿನಲ್ಲಿ ಇನ್ನೊಂದಿಲ್ಲ......
ಬೂಬಣ್ಣ: ಅದೇ, ನನ್ನ ಕಾರಿನ ವಿಶೇಷತೆ!
ರಾಮಣ್ಣ: ಹೌದಪ್ಪಾ! ಅದನ್ನೇ ಅವರೂ ಹೇಳಲಿಕ್ಕಿದ್ರು... ತನ್ನ ಹಾರ್ನ್ ಬಿಟ್ಟು ಬೇರೆಲ್ಲಾ ಭಾಗಗಳೂ ಸದ್ದು ಮಾಡುವ ಕಾರು ಜಗತ್ತಿನಲ್ಲಿ ಇದೊಂದೇ....

»»
ಆಧ್ಯಾಪಕಿ:
ಬೂಬಣ್ಣ, ಕಾಕತಾಳೀಯತೆಗೊಂದು ಉದಾಹರಣೆ ಕೊಡು..
ಚಿಕ್ಕ ಬೂಬಣ್ಣ: ನನ್ನ ಅಪ್ಪ, ಅಮ್ಮ ಇಬ್ಬರೂ ಒಂದೇ ದಿನ ಮದುವೆಯಾದರು..

»»
ಬೂಬಣ್ಣನ ಅಪ್ಪ: ನಿನಗೇನನ್ನೂ ಕಲಿಸಲು ಅಸಾಧ್ಯವೆಂದು ನಿನ್ನ ಅಧ್ಯಾಪಕಿಯು ಹೇಳುತ್ತಾಳೆ!
ಚಿಕ್ಕ ಬೂಬಣ್ಣ: ಅದಕ್ಕೇ ನಾನು ಯವಾಗಲೂ ಹೇಳೋದು, ಅವಳು ಯಾವುದೇ ಪ್ರಯೋಜನಕ್ಕಿಲ್ಲದ ಅಧ್ಯಾಪಕಿಯೆಂದು!

»»
ಚಿಕ್ಕ ಬೂಬಣ್ಣ: ಅಪ್ಪಾ, ಇವತ್ತು ಅಧ್ಯಾಪಕಿಯು, ಮುಂದೆ ನಿನ್ನ ಯಾವುದಾದರೂ ತಮ್ಮ, ತಂಗಿಯವರು ಶಾಲೆಗೆ ಬರಲಿರುವರೇ ಎಂದು ಕೇಳಿದ್ರು..
ಬೂಬಣ್ಣನ ಅಪ್ಪ: ಓಹ್! ಓಳ್ಳೆಯ ಅಧ್ಯಾಪಕಿಯರು. ನೀನು ನಮ್ಮೊಬ್ಬನೇ ಮಗುವೆಂದು ತಿಳಿದಾಗ ಏನಂದರು?
ಚಿಕ್ಕ ಬೂಬಣ್ಣ: ಹೆಚ್ಚೇನೂ ಇಲ್ಲಾ.. 'ಅಬ್ಬಾ! ಬಚಾವಾದೆ!', ಎಂದರು.. ಅಷ್ಟೇ..

»» ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋದಾಗ ಮೈಸೂರು ಅರಮನೆಗೆ ಭೇಟಿ ಕೊಟ್ಟರು.. ಬೂಬಣ್ಣನಿಗೆ ಬಹಳ ಸುಸ್ತಾಗಿತ್ತು ಎಂದು ಒಂದು ಕಡೆ ಅರಾಮಿಸಲು ಕುಳಿತನು..
ಕಾವಲುಗಾರ: ಓಯ್! ಟಿಪ್ಪು ಸುಲ್ತಾನನ ಸಿಂಹಾಸನದ ಮೇಲೆ ಯಾಕೆ ಕುಳಿತಿದ್ದೀ?! ಕೂಡಲೇ ಕೆಳಗೆ ಇಳಿ!
ಬೂಬಣ್ಣ: ಆಯ್ತಪ್ಪಾ! ಯಾಕೆ ಹಾಗೆ ಕಿರುಚುತ್ತಾ ಇದ್ದೀ? ಅವನು ಬಂದಾಗ ಇಳಿಯುತ್ತೇನೆ. ನನಗೆ ಭಾರೀ ಸುಸ್ತಾಗಿದೆ, ಹೋಗಿ ಬೇರೆ ಯಾರದಾದ್ರೂ ತಲೇ ತಿನ್ನು...

»»
ರಾಮಣ್ಣ: ಹೇ.. ಕೊಡೆಯಲ್ಲಿ ತೂತು ಯಾಕೆ ಮಾಡಿದೆ?!
ಬೂಬಣ್ಣ: ಅಯ್ಯೋ ಮೂರ್ಖಾ! ಮತ್ತೆ ಮಳೆ ನಿಂತು ಹೋದರೆ ನಂಗೆ ಹೇಗೆ ಗೊತ್ತಗುತ್ತೆ?

»» ಒಮ್ಮೆ ಬೂಬಣ್ಣ ಟೆಂಪೋ ಓಡಿಸುವಾಗ, ಅಪಘಾತವಾಗುತ್ತದೆ..
ಆರಕ್ಷಕ (ಪೋಲೀಸ್): ಏಯ್! ಈ ಅಪಘಾತ ಹೇಗಾಯಿತು? ಇದಕ್ಕೆ ಕಾರಣ ಯಾರು?
ಬೂಬಣ್ಣ: ಗೊತ್ತಿಲ್ಲ ಸ್ವಾಮಿ! ಆಗ ನಾನು ಒಳ್ಳೇ ನಿದ್ರೆಯಲ್ಲಿದ್ದೆ..

»» ಅಂದು ಬೂಬಣ್ಣ ಮೊದಲ ಸಲ ವಿಮಾನ ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ ಬಳಿ ಕೇಳಿ ತಿಳಿದುಕೊಂಡಿದ್ದನು..
ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ! ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...




Pradeepzone Home Add to favorites Sitemap Your Comments Your comments/feedback The Pradeepzone Blog Back to previous page Refresh this page Top of the page


»Disclaimer

Boobanna's declaration: I'll never marry in my life and I'll give the same advice to my children also.
 

 
Hey!! Do you know a hilarious joke you want to share with other visitor's?? Then, you can do so by
Clicking below!!







» Scientific Jokes » Q & A » Boobanna's Jokes » Funny Jokes » Silly Jokes » Not So Funny » Kannada Jokes
Home  |   Sitemap   |   Contact us   |   Feedback   |   Add to favourites  |   Guestbook   |    Refresh    |    Help&Support   |   Disclaimer  |   Terms of use  |   Top

P
RADEEP

©2008 Pradeep Features.
Best viewed on resolution 800 x 600 in Internet Explorer 6.0 or above
Now, also compatible with Firefox 1.5.0.6 or above!
 

Report Content · · Web Hosting · Blog · Guestbooks · Message Forums · Mailing Lists
Easiest Website Builder ever! · Build your own toolbar · Free Talking Character · Email Marketing
powered by a free webtools company bravenet.com