ಬೇರೆ ಬೇರೆ ವಿಭಾಗಗಳ ಕೆಲವು ಹೊಸಾ ಹಾಸ್ಯ ಚಟಾಕಿಗಳು!
ಎಲ್ಲವನ್ನೂ ನೋಡಲು ಆಯಾ ವಿಭಾಗಗಳಿಗೆ ಹೋಗಿ!
»»
ಗ್ರಾಹಕ: ಮಾಣಿ! ಮಾಣಿ! (ವೈಟರ್!
ವೈಟರ್!!) ನನ್ನ ಮಜ್ಜಿಗೆಯಲ್ಲಿ ಒಂದು ನೋಣವಿದೆ!
ಹೋಟೆಲ್ ಮಾಣಿ: ಚಿಂತೆ ಮಾಡಬೇಡಿ ಸ್ವಾಮಿ!
ನಿಮ್ಮ ಊಟದಲ್ಲಿರೋ ಜೇಡ ಅದನ್ನು ಹಿಡಿಯುತ್ತೆ..
»»
ಆರಕ್ಷಕ(ಪೋಲೀಸ್): ಓಯ್!
ಮಧ್ಯರಾತ್ರಿಯಲ್ಲಿ ಎಲ್ಲಿಗೆ ಹೋಗ್ತಿದ್ದೀ?!
ಕುಡುಕ: ಕುಡಿತದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ
ಒಂದು ಉಪನ್ಯಾಸ ಕೇಳಲು ಹೋಗ್ತಿದ್ದೇನೆ..
ಆರಕ್ಷಕ(ಪೋಲೀಸ್): ಏಯ್! ಸುಳ್ಳು ಹೇಳ್ತಿಯೇನೋ!
ಈ ಹೊತ್ತಿನಲ್ಲಿ ಯಾರು ಎಲ್ಲಿ ಉಪನ್ಯಾಸ ಕೊಡ್ತಾರೆ?
ಕುಡುಕ: ನನ್ನ ಹೆಂಡತಿ ಕೊಡ್ತಾಳೆ ಸಾರ್..
ನಮ್ಮನೆಯಲ್ಲಿ....
»»
ವಿದ್ಯಾರ್ಥಿ: ನಾನು ಮಾಡದೇ ಇದ್ದ ಕೃತ್ಯಕ್ಕಾಗಿ ನನಗೆ ಶಿಕ್ಷೆ
ಕೊಡುವಿರೇ?
ಅಧ್ಯಾಪಕ: ಅಯ್ಯಯ್ಯೋ! ಹಾಗೆಲ್ಲಾದರೂ ಉಂಟೇ?!
ವಿದ್ಯಾರ್ಥಿ: ಸಧ್ಯ! ನಾನು ನನ್ನ ಮನೆಕೆಲಸ(ಹೋಂವರ್ಕ್) ಮಾಡಿಲ್ಲ...
»»
ಹೆಂಡತಿ: ನಮ್ಮ ಅಡುಗೆಯವನನ್ನು ವಜಾ ಮಾಡಿ, ಇನ್ನು ಮುಂದೆ ಅಡುಗೆ ನಾನೇ
ಮಾಡಿದರೆ ನನಗೆಷ್ಟು ಹಣ ಕೊಡುವಿರಿ?!
ಗಂಡ: ಹಾಗೇನಾದರೂ ಆದ್ರೆ, ನಾನೇನನ್ನೂ ಕೊಡೋ ಅವಶ್ಯಕತೆಯೇ ಇರುವುದಿಲ್ಲ! ನನ್ನ
ಸಂಪೂರ್ಣ ಜೀವ ವಿಮೆಯ(ಇನ್ಶೂರನ್ಸ್) ಮೊತ್ತ ನಿನಗೇ ಸಿಗುತ್ತದೆ..
»»
ಮಗ: ಹೋದ ವರ್ಷ ಅಮ್ಮನ ಹೊಟ್ಟೆ ದೊಡ್ಡದಾದ ಮತ್ತೆ ನನ್ನ ತಂಗಿ
ಹುಟ್ಟಿದಳು. ಅಲ್ವಾ?
ಅಪ್ಪ: ಹೌದು ಮರೀ.. ಅದಕ್ಕೇನೀಗ?
ಮಗ: ಹಾಗಾದ್ರೆ ಈ ಬಾರಿ ನಿನ್ನ ಹೊಟ್ಟೆ ದೊಡ್ಡದಾಗಿದೆಯಲ್ಲಾ, ತಮ್ಮ
ಹುಟ್ತಾನ?
»»
ಅಧ್ಯಾಪಕಿ: ಭೋಲೂ, ನಿನ್ನ ನಮ್ಮ ಮನೆಯ ಸಾಕುಪ್ರಾಣಿಯ ಪ್ರಬಂಧ ನಿನ್ನ ಅಣ್ಣನ
ಪ್ರಬನ್ಧದ ಹಾಗೆಯೆ ಇದೆಯಲ್ಲಾ! ಅವನ ಪ್ರಬಂಧ ಕಾಪಿ ಹೊಡೆದಿರುವಿಯಾ?..
ಭೋಲು: ಇಲ್ಲಾ ಟೀಚರ್! ನಮ್ಮನೇಲಿರೋದು ಒಂದೇ ನಾಯಿ.. ಅದಕ್ಕೆ...
»»
ಅವನು: ತನ್ನ ಹೆಂಡ್ತಿಯನ್ನು ನದಿಗೆ ಎಸೆದ ಗಂಡನ
ಬಗ್ಗೆ ಗೊತ್ತಿದೆಯಾ?
ಇವನು: ಇಲ್ಲಾ! ಏನಾಯ್ತು??
ಅವನು: ಅವನನ್ನು ಈಗ ಪ್ರಾಣಿ ದಯಾ ಸಂಘದವರು
ನದಿಯಲ್ಲಿದ್ದ ಮೊಸಳೆಗಳ ಮೇಲೆ ಕ್ರೌರ್ಯ ಎಸಗಿದ್ದಕ್ಕೆ ತರಾಟೆಗೆ
ತೆಗೆದುಕೊಳ್ಳುತ್ತಿದ್ದಾರೆ...
»»
ಓಬ್ಬಳು ಹುಡುಗಿ ತನ್ನ ತಂದೆಗೆ ತನ್ನದೇ ನಿಶ್ಚಿತಾರ್ಥದ(engagement) ಬಗ್ಗೆ
ದೂರವಾಣಿಯ(telephone) ಮೂಲಕ ಹೇಳುತ್ತಿದ್ದಾಳೆ..... (ಇತ್ತೀಚೆಗೆ ಇವೆಲ್ಲಾ
ಸಾಮಾನ್ಯ, ಬಿಡಿ!)
ತಂದೆ: ಅವನ ಸಂಪಾದನೆ ಎಷ್ಟು? ಆಸ್ತಿ ಗೀಸ್ತಿ
ಏನಾದ್ರೂ ಇದೆಯಾ?...
ಮಗಳು: ಓ ದೇವರೇ!! ನೀವು ಗಂಡಸರೆಲ್ಲಾ ಒಂದೇ!
ಅವನೂ ನಿಮ್ಮ ಬಗ್ಗೆ ಅದನ್ನೇ ಕೇಳ್ತಾ ಇದ್ದ...
»» ಮನಸ್ಸಿಲ್ಲದೇ, ಹೋಸಾ ಕಾರು ಕೊಂಡ
ಗಂಡನು ತನ್ನ ಹೆಂಡತಿಯ ಒತ್ತಾಯಕ್ಕೆ ಕೊನೆಗೂ ಮಣಿದು, ಹೊಸಾ ಕಾರಿನ ಕೀಲಿಯನ್ನು (ಕೀ
ಅನ್ನು) ನೀಡುತ್ತಾ ಹೇಳಿದ,
"ನೆನಪಿರಲಿ! ಎಲ್ಲಾದರೂ ಅಫಘಾತವಾದಲ್ಲಿ, ಪತ್ರಿಕೆಯವರು ನಿನ್ನ ವಯಸ್ಸನ್ನೂ
ಮುದ್ರಿಸುತ್ತಾರೆ!"
::
::

ಬೂಬಣ್ಣನ ರಗಳೆಗಳು ::
»»
ಬೂಬಣ್ಣ: ಮೂರ್ಖತನದ ಪರಮಾವಧಿ ಯಾವುದು?
ರಾಮಣ್ಣ: ಹಂ... ನಿನ್ನ ಭಾವಚಿತ್ರ ನೋಡು,
ತಿಳಿಯುತ್ತೆ!
»»
ಸಂತ: ದೇವರೆಲ್ಲಿರುವನು?....
ಚಿಕ್ಕ ಬೂಬಣ್ಣ: ನಮ್ಮ ಶೌಚಾಲಯದಲ್ಲಿ, ಸ್ವಾಮಿ!
ಸಂತ: ಅಯ್ಯಯ್ಯೋ! ಯಾರದು? ಯಾರಂದರು?
ಚಿಕ್ಕ ಬೂಬಣ್ಣ: ನಾನಂದೆ, ಸ್ವಾಮೀ! ನಮ್ಮಪ್ಪ
ದಿನಾ ಬೆಳಿಗ್ಗೆ ಶೌಚಾಲಯದ ಹೋರಗೆ ನಿಂತು ಬೊಬ್ಬಿಡುತ್ತಾರೆ, "ಓ ದೇವರೇ!
ನೀನಿನ್ನೂ ಇಲ್ಲಿದ್ದೀಯಾ.."
»»
ಬೂಬಣ್ಣ: ನಾನೊಬ್ಬಳನ್ನು ಪ್ರೀತಿಸುತಿರುವೆ.
ಅವಳಿಗದನ್ನು ತಿಳಿಸಲು ಸೂಕ್ತವಾದ ಜಾಗ ಯಾವುದು?
ರಾಮಣ್ಣ: ದೇವಸ್ತಾನದ ಒಳಗೆ..
ಬೂಬಣ್ಣ: ದೇವಸ್ತಾನದೊಳಗೇ?! ಯಾಕೆ..
ರಾಮಣ್ಣ: ಯಾಕೆಂದರೆ, ಅಲ್ಲಿ ಅವಳು ಯಾವುದೇ
ಚಪ್ಪಲಿ, ಪಾದರಕ್ಷೆಯನ್ನು ಹಾಕಿಕೊಂಡಿರುವುದಿಲ್ಲ..
»» ಬೂಬಣ್ಣ
ಹೊಸಾ ಮೋಟಾರ್ ಬೈಕು ಕೊಂಡಾಗ ರಾಮಣ್ಣನನ್ನು ತಿರುಗಾಡಲೆಂದು ಅದರಲ್ಲಿ
ಕರೆದೊಯ್ಯುತ್ತಾನೆ...
ರಾಮಣ್ಣ(ಬೊಬ್ಬಿಡುತ್ತಾ): ಓ ಮೂರ್ಖ! ಇಷ್ಟು
ವೇಗವಾಗಿ ಯಾಕೆ ಗಾಡಿ ಓಡಿಸುತ್ತಿದ್ದೀ?! ನಮ್ಮಿಬ್ಬರ ತಿಥಿ ಮಾಡಿಸಲಾ?! ನನಗೆ
ಭಯವಾಗ್ತಾ ಇದೆ!
ಬೂಬಣ್ಣ: ಯಾಕೆ ಬೊಬ್ಬೆ ಹಾಕ್ತಾ ಇದ್ದೀ?!
ಭಯವಾದ್ರೆ ನನ್ನ ಹಾಗೆ ಕಣ್ಣು ಮುಚ್ಚಿಕೋ..
»» ಬೂಬಣ್ಣ
ಒಂದು ಕಾರು ಕೊಂಡಾಗ ತನ್ನ ಮಿತ್ರರನ್ನು ಅದರಲ್ಲಿ ತಿರುಗಾಡಲು ಕರೆದೊಯ್ಯುತ್ತಾನೆ..
ಅದರಲ್ಲಿ ತಿರುಗಾಡಿ ಹಿಂತಿರುಗಿದ ಮೇಲೆ...
ಬೂಬಣ್ಣ: ಹೇಗಿತ್ತು? ನನ್ನ ಕಾರು!!
ಭೀಮಣ್ಣ ಹಾಗೂ ಚೋಮಣ್ಣ: ಭಲೇ! ಭಲೇ! ಇಂತಹಾ ಕಾರು
ಜಗತ್ತಿನಲ್ಲಿ ಇನ್ನೊಂದಿಲ್ಲ......
ಬೂಬಣ್ಣ: ಅದೇ, ನನ್ನ ಕಾರಿನ ವಿಶೇಷತೆ!
ರಾಮಣ್ಣ: ಹೌದಪ್ಪಾ! ಅದನ್ನೇ ಅವರೂ
ಹೇಳಲಿಕ್ಕಿದ್ರು... ತನ್ನ ಹಾರ್ನ್ ಬಿಟ್ಟು ಬೇರೆಲ್ಲಾ ಭಾಗಗಳೂ ಸದ್ದು ಮಾಡುವ ಕಾರು
ಜಗತ್ತಿನಲ್ಲಿ ಇದೊಂದೇ....
»»
ಆಧ್ಯಾಪಕಿ: ಬೂಬಣ್ಣ, ಕಾಕತಾಳೀಯತೆಗೊಂದು ಉದಾಹರಣೆ ಕೊಡು..
ಚಿಕ್ಕ ಬೂಬಣ್ಣ: ನನ್ನ ಅಪ್ಪ, ಅಮ್ಮ ಇಬ್ಬರೂ
ಒಂದೇ ದಿನ ಮದುವೆಯಾದರು..
»»
ಬೂಬಣ್ಣನ ಅಪ್ಪ: ನಿನಗೇನನ್ನೂ ಕಲಿಸಲು
ಅಸಾಧ್ಯವೆಂದು ನಿನ್ನ ಅಧ್ಯಾಪಕಿಯು ಹೇಳುತ್ತಾಳೆ!
ಚಿಕ್ಕ ಬೂಬಣ್ಣ: ಅದಕ್ಕೇ ನಾನು ಯವಾಗಲೂ ಹೇಳೋದು,
ಅವಳು ಯಾವುದೇ ಪ್ರಯೋಜನಕ್ಕಿಲ್ಲದ ಅಧ್ಯಾಪಕಿಯೆಂದು!
»»
ಚಿಕ್ಕ ಬೂಬಣ್ಣ: ಅಪ್ಪಾ, ಇವತ್ತು ಅಧ್ಯಾಪಕಿಯು,
ಮುಂದೆ ನಿನ್ನ ಯಾವುದಾದರೂ ತಮ್ಮ, ತಂಗಿಯವರು ಶಾಲೆಗೆ ಬರಲಿರುವರೇ ಎಂದು ಕೇಳಿದ್ರು..
ಬೂಬಣ್ಣನ ಅಪ್ಪ: ಓಹ್! ಓಳ್ಳೆಯ
ಅಧ್ಯಾಪಕಿಯರು. ನೀನು ನಮ್ಮೊಬ್ಬನೇ ಮಗುವೆಂದು ತಿಳಿದಾಗ ಏನಂದರು?
ಚಿಕ್ಕ ಬೂಬಣ್ಣ: ಹೆಚ್ಚೇನೂ ಇಲ್ಲಾ.. 'ಅಬ್ಬಾ!
ಬಚಾವಾದೆ!', ಎಂದರು.. ಅಷ್ಟೇ..
»»
ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋದಾಗ ಮೈಸೂರು ಅರಮನೆಗೆ ಭೇಟಿ
ಕೊಟ್ಟರು.. ಬೂಬಣ್ಣನಿಗೆ ಬಹಳ ಸುಸ್ತಾಗಿತ್ತು ಎಂದು ಒಂದು ಕಡೆ ಅರಾಮಿಸಲು ಕುಳಿತನು..
ಕಾವಲುಗಾರ: ಓಯ್! ಟಿಪ್ಪು ಸುಲ್ತಾನನ ಸಿಂಹಾಸನದ
ಮೇಲೆ ಯಾಕೆ ಕುಳಿತಿದ್ದೀ?! ಕೂಡಲೇ ಕೆಳಗೆ ಇಳಿ!
ಬೂಬಣ್ಣ: ಆಯ್ತಪ್ಪಾ! ಯಾಕೆ ಹಾಗೆ ಕಿರುಚುತ್ತಾ
ಇದ್ದೀ? ಅವನು ಬಂದಾಗ ಇಳಿಯುತ್ತೇನೆ. ನನಗೆ ಭಾರೀ ಸುಸ್ತಾಗಿದೆ, ಹೋಗಿ ಬೇರೆ
ಯಾರದಾದ್ರೂ ತಲೇ ತಿನ್ನು...
»»
ರಾಮಣ್ಣ: ಹೇ.. ಕೊಡೆಯಲ್ಲಿ ತೂತು ಯಾಕೆ ಮಾಡಿದೆ?!
ಬೂಬಣ್ಣ: ಅಯ್ಯೋ ಮೂರ್ಖಾ! ಮತ್ತೆ ಮಳೆ ನಿಂತು
ಹೋದರೆ ನಂಗೆ ಹೇಗೆ ಗೊತ್ತಗುತ್ತೆ?
»»
ಒಮ್ಮೆ ಬೂಬಣ್ಣ ಟೆಂಪೋ ಓಡಿಸುವಾಗ, ಅಪಘಾತವಾಗುತ್ತದೆ..
ಆರಕ್ಷಕ (ಪೋಲೀಸ್): ಏಯ್! ಈ ಅಪಘಾತ ಹೇಗಾಯಿತು?
ಇದಕ್ಕೆ ಕಾರಣ ಯಾರು?
ಬೂಬಣ್ಣ: ಗೊತ್ತಿಲ್ಲ ಸ್ವಾಮಿ! ಆಗ ನಾನು ಒಳ್ಳೇ
ನಿದ್ರೆಯಲ್ಲಿದ್ದೆ..
»» ಅಂದು ಬೂಬಣ್ಣ ಮೊದಲ ಸಲ ವಿಮಾನ
ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ
ಬಳಿ ಕೇಳಿ ತಿಳಿದುಕೊಂಡಿದ್ದನು..
ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ!
ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು
ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...